ಬೈಕ್ ಕದ್ದು ಮಾರುತ್ತಿದ್ದ ಆರೋಪಿ ಸೆರೆ

CHN CRIME 22
Published on

ಚನ್ನಗಿರಿ: ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿ ಮಾರುತ್ತಿದ್ದ ಆರೋಪಿಯನ್ನು ಚನ್ನಗಿರಿ ಅಪರಾಧ ಇಲಾಖೆ ಪೊಲೀಸರು ಸೋಮವಾರ ಬಂಧಿಸಿ, ಎಂಟು ಬೈಕ್ ವಶ ಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಶಿರಾ ಪಟ್ಟಣದ ಈರಣ್ಣ ಬಂಧಿತ. ಇವನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ದುಮ್ಮಿ ಗ್ರಾಮದ ಹುಡುಗಿಯನ್ನು ಮದುವೆಯಾಗಿದ್ದ. ಬೈಕ್‌ಗಳನ್ನು ಕದ್ದು ಇದೇ ಗ್ರಾಮಕ್ಕೆ ತಂದು ಮಾರುತ್ತಿದ್ದ. ಕಳವು ಮಾಡಿದ್ದ ಎಂಟು ಬೈಕ್‌ಗಳನ್ನು ಇಲ್ಲಿಯೇ ಮಾರಾಟ ಮಾಡಿದ್ದಾನೆ.

ಚನ್ನಗಿರಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬೈಕ್ ಕದ್ದು ತಾಲೂಕಿನ ಅಮ್ಮನಗುಡ್ಡ ಕುಕ್ಕವಾಡೇಶ್ವರಿ ದೇವಸ್ಥಾನಕ್ಕೆ ಹೋಗಿ ಚನ್ನಗಿರಿಗೆ ಬಂದು ಮದ್ಯ ಸೇವಿಸಲು ತೆರಳುತ್ತಿದ್ದ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸಂಶಯಗೊಂಡು ವಿಚಾರಣೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net