ಮುಂಡಗೋಡದಲ್ಲಿ ಬೈಕ್ ಕಳ್ಳತನ

Crime Logo
Published on

ಮುಂಡಗೋಡ: ಮನೆ ಮುಂದೆ ನಿಲ್ಲಿಸಿದ್ದ ಬೈಕ್​ವೊಂದನ್ನು ಯಾರೋ ಕಳ್ಳತನ ಮಾಡಿರುವ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಟ್ಟಣದ ಗಾಂಧಿನಗರದ ಮಂಜುನಾಥ ಮಹಾಂತೇಶ ಕುಂಬಾರ ಎಂಬುವವರು ತಮ್ಮ ಮನೆ ಎದುರು 2024ರ ಡಿ. 24ರಂದು ರಾತ್ರಿ ಸ್ಪೆಂಡರ್ ಪ್ಲಸ್ ಬೈಕ್ ನಿಲ್ಲಿಸಿದ್ದರು.

ಮರುದಿನ ಬೆಳಗ್ಗೆ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಇದೂವರೆಗೂ ಬೈಕ್ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.

ಬೈಕ್ ಹುಡುಕಿ ಕೊಡುವಂತೆ ಮಂಜುನಾಥ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net