

ಹುಬ್ಬಳ್ಳಿ: ಬೈಕ್ ಕಳ್ಳತನ ಮಾಡುತ್ತಿದ್ದವನನ್ನು ಇಲ್ಲಿಯ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿ, ಆತನಿಂದ ಆರು ವಿವಿಧ ಕಂಪನಿ ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ನೇಕಾರನಗರ ಯಾಜ್ ಊರ್ಫ ಶ್ಯಾಂಪೂ ತೊರೆವಾಲೆ ಎಂದು ಗುರುತಿಸಲಾಗಿದೆ.
ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ಹಲವು ದ್ವಿಚಕ್ರ ವಾಹನ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಪತ್ತೆ ಕಾರ್ಯಕ್ಕಾಗಿ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಠಾಣೆ ಇನ್ಸಪೆಕ್ಟರ್ ಎಸ್.ಆರ್. ನಾಯಕ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ ತಂಡವು, ಬೈಕ್ ಕಳ್ಳತನ ಮಾಡಿದ್ದ ಹುಬ್ಬಳ್ಳಿಯ ನೇಕಾರನಗರದ ಫಯಾಜನನ್ನು ಬಂಧಿಸಿದೆ. ಹೆಚ್ಚಿನ ವಿಚಾರಣೆ ವೇಳೆ ಆರೋಪಿತ ಮತ್ತಷ್ಟು ಬೈಕ್ ಕಳ್ಳತನ ಮಾಡಿದ್ದರ ಬಗ್ಗೆ ತಿಳಿದು ಬಂದಿದೆ. ಸದ್ಯ 2.25 ಲಕ್ಷ ಮೌಲ್ಯದ 6 ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆ ನಡೆಸಿದ ಇನ್ಸ್ ಪೆಕ್ಟರ್ ಎಸ್.ಆರ್. ನಾಯಕ, ಪಿಎಸ್ಐ ರವಿ ವಡ್ಡರ ಮತ್ತು ಸಿಬ್ಬಂದಿ ಸಿ.ಎಸ್. ಅಂಬಿಗೇರ, ಎನ್.ಐ. ನೀಲಗಾರ, ಹನಮಂತ ಕರಗಾಂವಿ, ಆರ್.ಎಸ್. ಹರಕಿ, ಬಿ.ಎಸ್. ಗಳಗಿ, ಆರ್.ಎಚ್. ಹಿತ್ತಲಮನಿ, ಎಸ್.ಎಸ್. ಮೇಟಿ, ಜಿ.ವಿ. ವಗ್ಗಣ್ಣವರ ಅವರನ್ನೊಳಗೊಂಡ ತಂಡದ ಕಾರ್ಯವೈಖರಿಗೆ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.