

ಶಿಗ್ಗಾಂವಿ: ಸರ್ಕಾರಿ ಕಾಲೇಜ್ ಬಳಿಯ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ತಾಲೂಕಿನ ತಡಸ ಠಾಣೆ ಪೊಲೀಸರು ಆತನಿಂದ ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.
ತಡಸ ಗ್ರಾಮದ ರಮೇಶ ರಂಗಪ್ಪ ಮುಗಳಿಕಟ್ಟಿ (30) ಬಂಧಿತ ಆರೋಪಿ. ಈತನಿಂದ ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಈತ ತಡಸ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಐ.ಬಿ. ಹತ್ತಿರ ಎರಡು ಬೈಕ್ಗಳನ್ನು ಕಳ್ಳತನ ಮಾಡಿಕೊಂಡು ಅವುಗಳಲ್ಲಿಯೆ ತಿರುಗಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.
ಪಿಎಸ್ಐ ಪಿ.ಎಫ್. ನೀರೋಳಿ, ಎಎಸ್ಐ ಕೆ.ಜಿ. ಸಂಶಿ, ಸಿಬ್ಬಂದಿಯಾದ ಬಿ.ಎನ್. ಬೊಮ್ಮನಹಳ್ಳಿ, ಎಸ್.ಎಸ್. ಸವಣೂರ, ಎಂ.ಡಿ. ಬೆಳವಲಕೊಪ್ಪ, ಎಸ್.ಎಲ್. ಮಲ್ಲಮ್ಮನವರ, ಆನಂದ ರೊಳ್ಳಿ, ರವಿ ಬೆಳವಲಕೊಪ್ಪ ಕಾರ್ಯಾಚರಣೆಯಲ್ಲಿದ್ದರು.