

ಶಿವಮೊಗ್ಗ: ಬೈಕ್ ಕಳ್ಳತನ ಪ್ರಕರಣದಲ್ಲಿ ಕುಂಸಿ ಠಾಣೆ ಪೊಲೀಸರು ಅಪ್ರಾಪ್ತ ಸೇರಿ ಇಬ್ಬರನ್ನು ಬಂಧಿಸಿದ್ದು 90 ಸಾವಿರ ರೂ. ಮೌಲ್ಯದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ಅಂಬೇಡ್ಕರ್ ನಗರದ ಅಲ್ಲಾ ಬಕ್ಷ್ ಅಲಿಯಾಸ್ ಪೊಟ್ಯಾಟೋ (19) ಹಾಗೂ ಅಪ್ರಾಪ್ತನನ್ನು ಬಂಧಿಸಲಾಗಿದೆ. ಮೇ 14ರಂದು ಕುಂಸಿ ಠಾಣೆ ವ್ಯಾಪ್ತಿಯ ಕನಕನಗರದಲ್ಲಿ ಶಿವು ಎಂಬುವರ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಶಿವು ಅವರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಇನ್‌ಸ್ಪೆಕ್ಟರ್ ಬಸವರಾಜ್ ನೇತೃತ್ವದಲ್ಲಿ ಪಿಎಸ್‌ಐ ಶಾಂತರಾಜ್, ಸಿಬ್ಬಂದಿಗಳಾದ ಪ್ರಕಾಶ್,ಶಿವಪ್ಪ, ಶಶಿಧರ, ರಾಜು ಕಾಂಬ್ಳೆ, ಬುರಾನ್, ಆದರ್ಶ, ವಿನಾಯಕ, ಶಶಿಕುಮಾರ್, ಮಂಜುನಾಥ, ದಿನೇಶ್‌ರಾವ್, ಜಯಕುಮಾರ್ ಹಾಗೂ ಎಸ್ಪಿ ಕಚೇರಿ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಗುರುರಾಜ್, ಇಂದ್ರೇಶ್ ಮತ್ತು ವಿಜಯ್ ಕುಮಾರ್ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದೆ.