

ಶಿಗ್ಗಾಂವಿ: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಮುತ್ತಳ್ಳಿ-ಜಿಗಳೂರ ರಸ್ತೆಯ ಬೆಣ್ಣಿಹಳ್ಳದ ಸೇತುವೆ ಮೇಲೆ ಭಾನುವಾರ ನಡೆದಿದೆ.
ತಾಲೂಕಿನ ಹುಲಗೂರ ಗ್ರಾಮದ ಸುನೀಲ ಬಸಪ್ಪ ಯಲವಿಗಿ (27) ಮೃತ ವ್ಯಕ್ತಿ.
ಈತ ಬೆಲವಂತರ ಗ್ರಾಮದಿಂದ ಹುಲಗೂರ ಗ್ರಾಮಕ್ಕೆ ಬರುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.