ಬೈಕ್ ಸ್ಕಿಡ್’ ಗಾಯಾಳು ಸಾವು

Bike Accident_2
Published on

ನರಗುಂದ: ತಾಲೂಕಿನ ಅರಿಷಿಣಗೋಡಿ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಹಂಪಿಹೊಳಿ ಗ್ರಾಮದ ಮಕ್ತುಂಬಿ ಷರೀಪ ಸುಂಕದ (26) ಮೃತ ದುರ್ದೈವಿ. ಮಹಿಳೆ ಹಾಗೂ ಆಕೆಯ ಪತಿ 3 ವರ್ಷದ ಪುತ್ರನೊಂದಿಗೆ ಬೈಕ್‌ನಲ್ಲಿ ಫೆ.16ರಂದು ನರಗುಂದ ಮಾರ್ಗವಾಗಿ ನಲವಡಿಗೆ ತೆರಳುತ್ತಿದ್ದರು. ಅರಿಷಿಣಗೋಡಿ ಬಳಿ ಬೈಕ್ ಸ್ಕಿಡ್ ಆಗಿದ್ದರಿಂದ ಹಿಂಬದಿಯಲ್ಲಿ ಕುಳಿತಿದ್ದ ಮಕ್ತುಂಬಿ ಹಾಗೂ ಆಕೆಯ ಪುತ್ರ ಉಜೇರ ಗಂಭೀರ ಗಾಯಗೊಡಿದ್ದರು. ನರಗುಂದ ತಾಲೂಕಾಸ್ಪತ್ರೆಯಲ್ಲಿ ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಮಕ್ತುಂಬಿ ಭಾನುವಾರ ಮೃತಪಟ್ಟಿದ್ದು, ಮೂರು ವರ್ಷದ ಮಗುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ನರಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net