ಬೈಕ್​ ಸ್ಕಿಡ್​ ಆಗಿ ಬಿದ್ದು ಸವಾರ ಸಾವು

Crime Logo
Published on

ಹಿರೇಕೆರೂರ: ಬೈಕ್​ ಸ್ಕಿಡ್​ ಆಗಿ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಕೋಡ-ಲಿಂಗಾಪುರ ಗ್ರಾಮದ ರಸ್ತೆಯಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಕೋಡ ಗ್ರಾಮದ ಭರಮಪ್ಪ ತಟ್ಟೆಪ್ಪ ದೂಳ್ಳಣ್ಣನವರ (36) ಮೃತ ಬೈಕ್​ ಸವಾರ.
ಇವರು ಬೈಕ್​ ಮೇಲೆ ಕೋಡ ಗ್ರಾಮದಿಂದ ಲಿಂಗಾಪುರಕ್ಕೆ ತೆರಳುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ಬೈಕ್​ ಸ್ಕಿಡ್​ ಆಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net