

ಹಿರೇಕೆರೂರ: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟ ಟನೆ ತಾಲೂಕಿನ ನಿಟ್ಟೂರ&ಕಚವಿ ರಸ್ತೆಯಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಸಾತೇನಹಳ್ಳಿಯ ಶೇಖಪ್ಪ ಮಲ್ಲೇಶಪ್ಪ ಪೂಜಾರ (45) ಮೃತ ಬೈಕ್ ಸವಾರ.
ಇವರು ನಿಟ್ಟೂರ ಗ್ರಾಮದಿಂದ ಕಚವಿ ಗ್ರಾಮದ ಕಡೆಗೆ ಹೊರಟಿದ್ದ ಸಮಯದಲ್ಲಿ ಬೈಕ್ ನಿಯಂತ್ರಿಸಲಾಗದೆ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.