

ಸವಣೂರ: ಬೈಕ್ನ ಸೈಡ್ ಬ್ಯಾಗ್ನಲ್ಲಿಟ್ಟದ್ದ ಹಣದ ಬ್ಯಾಗ್ಅನ್ನು ಯಾರೋ ಖದೀಮರು ಕಳ್ಳತನ ಮಾಡಿಕೊಂಡು ಹೋದ ಘಟನೆ ಇಲ್ಲಿಯ ಹಳೆ ಬಸ್ ನಿಲ್ದಾಣದ ಬಳಿ ಗುರುವಾರ ನಡೆದಿದೆ.
ಧರ್ಮಪ್ಪ ಶಂಕ್ರಪ್ಪ ಲಮಾಣಿ (67) ಎಂಬುವರ ಹಣ ದೋಚಿರುವುದು.
ಇವರು ಬ್ಯಾಂಕ್ನಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ 1 ಲಕ್ಷ ರೂ. ತೆಗೆಸಿಕೊಂಡು ಮತ್ತು ತಮ್ಮ ಬಳಿಯಿದ್ದ 63 ಸಾವಿರ ರೂ.ಅನ್ನು ಬ್ಯಾಗ್ನಲ್ಲಿಟ್ಟು ಬೈಕ್ನ ಸೈಡ್ ಬ್ಯಾಗ್ನಲ್ಲಿಟ್ಟಿದ್ದರು. ಬೈಕ್ ಪಂಚರ್ ತಿದ್ದಿಸುವ ಸಲುವಾಗಿ ಅಂಗಡಿ ಎದುರು ನಿಲ್ಲಿಸಿದಾಗ ಯಾರೋ ಹಣ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.