ಬೈಕ್​ ಸೈಡ್​ ಬ್ಯಾಗ್​ನಲ್ಲಿದ್ದ ಹಣ ಲೂಟಿ

Crime Logo
Published on

ಹಿರೇಕೆರೂರ: ಬ್ಯಾಂಕ್​ನಲ್ಲಿ ಹಣ ಡ್ರಾ ಮಾಡಿಕೊಂಡು ಬೈಕ್​ನ ಸೈಡ್​ ಕವರನಲ್ಲಿ ಇಟ್ಟಿದ್ದ ಹಣವನ್ನು ಯಾರೋ ಖದೀಮರು ದೋಚಿದ ಘಟನೆ ಪಟ್ಟಣದ ಯೂನಿಯನ್​ ಬ್ಯಾಂಕ್​ ಹತ್ತಿರ ಗುರುವಾರ ನಡೆದಿದೆ.

ತಾಲೂಕಿನ ಗುಂಡಗಟ್ಟಿ ಗ್ರಾಮದ ಈರಪ್ಪ ತಿರಕಪ್ಪ ಬಣಕಾರ (42) ಎಂಬುವರ ಹಣ ದೋಚಿರುವುದು.

ಇವರು ಬ್ಯಾಂಕ್​ನಲ್ಲಿ 1 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಬಂದು ಬೈಕ್​ನ ಸೈಡ್​ ಕವರನಲ್ಲಿಟ್ಟು ಕಬ್ಬಿನ ಹಾಲು ಕುಡಿಯುವ ಸಲುವಾಗಿ ರಸ್ತೆ ಬದಿಯಿದ್ದ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಯಾರೋ ಹಣ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net