ಬೈಕ್​ನ ಸೈಡ್​ ಬ್ಯಾಗ್​ನಲ್ಲಿದ್ದ 4.50 ಲಕ್ಷ ರೂ. ಕಳ್ಳತನ

Thief
Published on

ರಾಣೆಬೆನ್ನೂರ: ಬೈಕ್​ನ ಸೈಡ್​ ಬ್ಯಾಗ್​ನಲ್ಲಿಟ್ಟಿದ್ದ 4.50 ಲಕ್ಷ ರೂ. ಹಣವನ್ನು ಯಾರೋ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಶಿವಾನಂದ ಗಣೇಶಪ್ಪ ಕನ್ನಪ್ಪಳವರ (44) ಎಂಬುವರ ಹಣ ಕಳ್ಳತನ ಮಾಡಿರುವುದು.

ಇವರು ತಮ್ಮ ಬೈಕ್​ನ ಸೈಡ್​ ಬ್ಯಾಗ್​ನಲ್ಲಿ 4.50 ಲಕ್ಷ ರೂ. ಹಣವಿಟ್ಟುಕೊಂಡು ಗ್ರಾಮದ ಮಹಾತ್ಮ ಗಾಂಧಿ ವೃತ್ತದಲ್ಲಿ ನೀರು ಕುಡಿಯಲು ಎಂದು ಬೈಕ್​ ರಸ್ತೆ ಬದಿ ನಿಲ್ಲಿಸಿ ಹೋಟೆಲ್​ಗೆ ಹೋದಾಗ ಯಾರೋ ಬ್ಯಾಗ್​ನಲ್ಲಿದ್ದ ಹಣ ಕಳ್ಳತನ ಮಾಡಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net