ಬೈಕ್ ಸವಾರರು ಹೆಲ್ಮೆಟ್ ಧರಿಸಲಿ

DVD hellmet
ಜಾಲಹಳ್ಳಿಯಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸುವ ಕುರಿತು ಆಟೋದಲ್ಲಿ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಯಿತು. ಪೊಲೀಸ್ ಸಿಬ್ಬಂದಿ ರಾಜು ರಾಠೋಡ್, ಆಂಜನೇಯ ಇದ್ದರು.
Published on

ದೇವದುರ್ಗ: ಜೀವರಕ್ಷಣೆ ದೃಷ್ಟಿಯಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಜತೆಗೆ ವಾಹನಗಳ ಅಗತ್ಯ ದಾಖಲೆ, ವಿಮೆ ಹೊಂದಿರಬೇಕು ಎಂದು ಪಿಎಸ್‌ಐ ವೈಶಾಲಿ ಝಳಕಿ ಹೇಳಿದರು.

ತಾಲೂಕಿನ ಜಾಲಹಳ್ಳಿ ಶ್ರೀಲಕ್ಷ್ಮೀರಂಗನಾಥ ದೇವಸ್ಥಾನ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಜಿಲ್ಲೆಯ ಎಲ್ಲ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿಯೇ ವಾಹನ ಓಡಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಬೈಕ್ ಸವಾರರು ನಿಯಮ ಪ್ರಕಾರ ಬೈಕ್ ಚಲಾಯಿಸಬೇಕು. ಹೆಲ್ಮೆಟ್ ಜತೆಗೆ ವಾಹನಗಳ ದಾಖಲೆ, ಚಾಲನೆ ಪರವಾನಗಿ, ಬೈಕ್ ವಿಮೆ ದಾಖಲೆಗಳನ್ನು ಹೊಂದಿರಬೇಕು. ನಿರ್ಲಕ್ಷ್ಯ ಮಾಡಿದರೆ ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ನಂತರ ಆಟೋದಲ್ಲಿ ಧ್ವನಿವರ್ಧಕದ ಮೂಲಕ ವಿವಿಧೆಡೆ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಈರಪ್ಪ ನಾಯಕ, ಸದಸ್ಯರಾದ ತಿಮ್ಮಣ್ಣ ನಾಯಕ, ಚನ್ನಪ್ಪ ಅಂದೇಲಿ, ಪೊಲೀಸ್ ಸಿಬ್ಬಂದಿ ರಾಜು ರಾಠೋಡ್, ಆಂಜನೇಯ, ಮುಖಂಡರಾದ ಗೋವಿಂದಪ್ಪ ಬಂಡಿ, ಶ್ರೀಧರ ದೇಸಾಯಿ, ವಿನೋದ್‌ಕುಮಾರ, ಯಂಕೋಬ ಪೂಜಾರಿ, ವೆಂಕಟಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net