ಯಾವುದೋ ವಾಹನ ಡಿಕ್ಕಿಯಾಗಿ ಬೈಕ್​ ಸವಾರ ಸಾವು

Bike Accident_2
Published on

ರಾಣೆಬೆನ್ನೂರ: ಬೈಕ್​ಗೆ ಯಾವುದೋ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.

ತಾಲೂಕಿನ ಕವಲೆತ್ತು ಗ್ರಾಮದ ತಿಪ್ಪೇಶ ಮಂಜುನಾಥ ಕರೂರ (29) ಮೃತ ವ್ಯಕ್ತಿ.

ಈತ ಹಲಗೇರಿ ಕಡೆಯಿಂದ ರಾಣೆಬೆನ್ನೂರ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ತಿಪ್ಪೇಶ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net