

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದ ಖಿಳೇಗಾಂವ ರಸ್ತೆಯಲ್ಲಿ ಸೋಮವಾರ ಬೈಕ್ ಹಾಗೂ ಕ್ರೂಸರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ. ಗ್ರಾಮದ ಕುಮಾರ ಗುರುಲಿಂಗ ಮಾಲಗಾಂವಿ (23) ಮೃತ ಚಾಲಕ. ಮನೆಯಿಂದ ಅನಂತಪುರ ಗ್ರಾಮದ ಕಡೆಗೆ ಆಗಮಿಸುವಾಗ ದುರ್ಘಟನೆ ಸಂಭವಿಸಿದೆ.ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.