ಕೋಳಿ ಸಾಗಾಟ ವಾಹನ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲಿ ಸಾವು

Crime
Published on

ಬೆಳ್ವೆ: ಇಲ್ಲಿನ ತಾರಿಕಟ್ಟೆ ಕ್ರಾಸ್ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಮಂಗಳವಾರ ಮುಂಜಾನೆ ಕೋಳಿ ಸಾಗಾಟದ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಹೆಂಗವಳ್ಳಿ ಗ್ರಾಮದ ತೊಂಭತ್ತು ಇರ್ಗಿ ನಿವಾಸಿ ಲಕ್ಷ್ಮಣ ನಾಯ್ಕ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಕ್ಷ್ಮಣ ನಾಯ್ಕ ಮನೆಯಿಂದ ಅಲ್ಬಾಡಿ ಚಕ್ಕುಲಿ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಬೆಳ್ವೆ ಭಾಗದಿಂದ ವೇಗವಾಗಿ ಬಂದ ಕೋಳಿ ಸಾಗಾಟದ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕನ್ನು ಬಹಳ ದೂರದವರೆಗೆ ಎಳೆದು ಕೊಂಡು ಹೋಗಿದ್ದು, ಬೈಕ್ ನಜ್ಜು ಗುಜ್ಜಾಗಿದ್ದು, ಯುವಕನ ತಲೆಯ ಮೇಲೆ ವಾಹನ ಹರಿದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಲಕ್ಷಣ ನಾಯ್ಕ ತಂದೆ ಮೋಹನ ನಾಯ್ಕ ಅನಾರೋಗ್ಯದಿಂದ ಬಳಲುತ್ತಿದ್ದು, ಆರು ಮಕ್ಕಳಲ್ಲಿ ಲಕ್ಷ್ಮಣ ಏಕೈಕ ಪುತ್ರ. ಉಳಿದ ಐವರು ಸಹೋದರಿಯರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net