ಬೈಕ್ ಸವಾರ ಸಾವು, ಒಬ್ಬನಿಗೆ ತೀವ್ರ ಗಾಯ

bike rider killed, one seriously injured
Published on

ಹಾನಗಲ್ಲ: ಬೈಕ್ ಮತ್ತು ಗೂಡ್ಸ್ ಗಾಡಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಗುಂಡೂರ ಸಮೀಪ ಮಂಗಳವಾರ ಸಂಜೆ ನಡೆದಿದೆ.

ತಾಲೂಕಿನ ಜಾನಗುಂಡಿಕೊಪ್ಪ ಗ್ರಾಮದ ಶಂಭು ಲಮಾಣಿ (16) ಮೃತಪಟ್ಟ ಬೈಕ್ ಸವಾರ. ಇದೇ ಗ್ರಾಮದ ಪ್ರಶಾಂತ ಲಮಾಣಿ (17) ತೀವ್ರವಾಗಿ ಗಾಯಗೊಂಡಿದ್ದು, ಹಾನಗಲ್ಲ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.

ಬೈಕ್ ಸವಾರ ಹಾನಗಲ್ಲ ಕಡೆಯಿಂದ ಸ್ವಗ್ರಾಮ ಜಾನಗುಂಡಿಕೊಪ್ಪ ಗ್ರಾಮಕ್ಕೆ ತೆರಳುವ ವೇಳೆ ಗುಂಡೂರ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net