ಬ್ಯಾರಿಕೇಡ್ ತಪ್ಪಿಸುವ ವೇಳೆ ಹಿಂದಿನಿಂದ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

Nithin
Published on

ಉಳ್ಳಾಲ: ಕುಂಪಲ ಬೈಪಾಸ್‌ನಲ್ಲಿ ಮೀನಿನ ಲಾರಿ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಾಸರಗೋಡು ನೀರ್ಚಾಲ್ ಮಾನ್ಯ ನಿವಾಸಿ ನಿತಿನ್ ಎಂ.ಡಿ(27) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಗಳೂರು ಕಡೆಯಿಂದ ಕಾಸರಗೋಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಹೆದ್ದಾರಿಯಲ್ಲಿ ಇಟ್ಟಿದ್ದ ಬ್ಯಾರಿಕೇಡ್ ತಪ್ಪಿಸುವ ಸಂದರ್ಭ ಹಿಂಬದಿಯಿಂದ ಮಲ್ಪೆಯಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಮೀನಿನ ಲಾರಿ ಡಿಕ್ಕಿಯಾಗಿದೆ. ಕಾಸರಗೋಡಿನಲ್ಲಿ ಸೋಲಾರ್ ಕಂಪನಿಯಲ್ಲಿ ಕೆಲಸಕ್ಕಿದ್ದ ನಿತಿನ್ ಸ್ನೇಹಿತನ ಬೈಕ್‌ನಲ್ಲಿ ಮಂಗಳೂರಿಗೆ ಆಗಮಿಸಿದ್ದು, ವಾಪಾಸ್ ಕಾಸರಗೋಡು ಕಡೆ ಹೋಗುವ ಸಂದರ್ಭ ಘಟನೆ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿತಿನ್ ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net