ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು

ACCIDENT
Published on

ಗುಂಡ್ಲುಪೇಟೆ: ತಾಲೂಕಿನ ಕುರುಬರಹುಂಡಿ ಸಮೀಪ ಬಾಳೆಕಾಯಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಡಿಕ್ಕಿಯಿಂದ ಬೈಕ್ ಸವಾರ ಮೃತಪಟ್ಟಿದ್ದಾರೆ.

ಗ್ರಾಮದ ಮಲ್ಲಪ್ಪ ಪುತ್ರ ಮಗ ಬಸಪ್ಪ(28) ಮೃತರು. ಮಂಗಳವಾರ ಸಂಜೆ ಬೈಕ್‌ನಲ್ಲಿ ಬೊಮ್ಮನಹಳ್ಳಿಯಿಂದ ಸ್ವಗ್ರಾಮಕ್ಕೆ ಹೋಗುವಾಗ ತಿರುವಿನಲ್ಲಿ ಎದುರಾದ ಬಾಳೆಕಾಯಿ ತುಂಬಿದ ಪಿಕಪ್‌ಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಬಸಪ್ಪ ಮೃತಪಟ್ಟಿದ್ದಾರೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net