ಕಾರ್ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯ

Bike Accident_1
Published on

ಮುಂಡಗೋಡ: ಕಾರ್ ಹಾಗೂ ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನೊಬ್ಬ ತೀವ್ರ ಗಾಯಗೊಂಡ ಘಟನೆ ತಾಲೂಕಿನ ಕರಗಿನಕೊಪ್ಪ ಬಳಿಯ ಲೊಯೋಲ ಶಾಲೆಯ ಬಳಿ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಜರುಗಿದೆ.

ತಾಲೂಕಿನ ಚಿಟಗೇರಿ ಗ್ರಾಮದ ಸಿದ್ದಪ್ಪ ಯಮುನಪ್ಪ ನಾಯ್ಕರ (45) ಗಾಯಗೊಂಡ ವ್ಯಕ್ತಿ. ಬೈಕ್ ಮೇಲೆ ಮುಂಡಗೋಡನಿಂದ ಚಿಟಗೇರಿಗೆ ಹೋಗುವಾಗ ಲೊಯೋಲ ಶಾಲೆ ಬಳಿ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದು ನಂತರ ಕಾರ್​ಗೆ ಡಿಕ್ಕಿ ಹೊಡೆದ ಪರಿಣಾಮ ಸಿದ್ದಪ್ಪನ ಮುಖ ಹಾಗೂ ತಲೆಗಳಿಗೆ ಬಲವಾದ ಹೊಡೆತ ಬಿದ್ದು ತೀವ್ರ ಗಾಯಗೊಂಡಿದ್ದು, 108 ವಾಹನದ ಸಿಬ್ಬಂದಿ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net