ಅಪಘಾತದಲ್ಲಿ ಬೈಕ್​ ಸವಾರನಿಗೆ ಗಾಯ

ನಾಗರಾಜ್​
ನಾಗರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ಶಕ್ತಿನಗರದ ಜಂಕ್ಷನ್​ ಬಳಿ ಅವಘಡ
  • ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲು
ಬೆಳ್ತಂಗಡಿ: ಪಿಕಪ್​ ಹಾಗೂ ಬೈಕ್​ ನಡುವೆ ನಡೆದ ಅಪಘಾತದಲ್ಲಿ ಬೈಕ್​ ಸವಾರ ಗಂಭೀರ ಗಾಯಗೊಂಡ ಘಟನೆ ಕುವೆಟ್ಟು ಗ್ರಾಮದ ಶಕ್ತಿನಗರದ ಜಂಕ್ಷನ್​ ಬಳಿ ನಡೆದಿದೆ.
ಗುರುವಾಯನಕೆರೆ- ಶಕ್ತಿನಗರ ವೃತ್ತ ಬಳಿ ಕಾರ್ಕಳ- ಬದ್ಯಾರ್​ ಜಂಕ್ಷನ್​ ಕಡೆಯಿಂದ ಬರುತ್ತಿದ್ದ ಬೈಕ್​ ಸವಾರ ನಾಗರಾಜ್(21) ಗುರುವಾಯನಕೆರೆ ಕಡೆಯಿಂದ ಬರುತ್ತಿದ್ದ ಪಿಕಪ್​ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಸ್ಥಳಿಯರು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net