ಬೈಕ್ ಸವಾರನಿಗೆ 28 ಸಾವಿರ ರೂ. ದಂಡ

Published on

ಭಟ್ಕಳ: ಹೆಲ್ಮೆಟ್ ಧರಿಸದಿರುವುದು ಹಾಗೂ ಮದ್ಯ ಸೇವಿಸಿ ಬೈಕ್ ಚಲಾಯಿಸಿಕೊಂಡು ಬಂದ ಸವಾರನಿಗೆ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯ 28 ಸಾವಿರ ರೂ. ದಂಡ ವಿಧಿಸಿದೆ.

ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯ ಹತ್ತಿರ ಬುಧವಾರ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ನಾಯ್ಕ ಅವರು ವಾಹನ ತಪಾಸಣೆ ಮಾಡುತ್ತಿರುವ ವೇಳೆ ಸವಾರ ಸಿಕ್ಕಿ ಬಿದ್ದಿದ್ದಾನೆ. ಮದ್ಯ ಸೇವನೆ ಮಾಡಿ ವಾಹನ ಚಾಲನೆ, ಚಾಲನಾ ಪರವಾನಗಿ, ಇನ್ಶೂರೆನ್ಸ್ ಇಲ್ಲದಿರುವುದು ಮತ್ತು ವಾಹನ ನೋಂದಣಿಯನ್ನೂ ಮಾಡಿಸದ ಬಗ್ಗೆ ತಪಾಸಣೆ ವೇಳೆ ಕಂಡು ಬಂದಿದೆ. ಸವಾರನ ವಿರುದ್ಧ ಭಟ್ಕಳ ನ್ಯಾಯಾಲಯಕ್ಕೆ ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾಧೀಶರು ತಪ್ಪಿತಸ್ಥ ಸವಾರನಿಗೆ 28,000 ರೂ. ದಂಡ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net