ಆಟೋ ಹಾಗೂ ಬೈಕ್ ನಡುವೆ ಮುಖಮುಖಿ ಡಿಕ್ಕಿ; ಬೈಕ್ ಸವಾರ ಸಾವು

Crime Logo
Published on

ಮೈಸೂರು: ನಗರದ ಉದಯಗಿರಿಯಲ್ಲಿ ಗುರುವಾರ ಆಟೋ ಹಾಗೂ ಬೈಕ್ ನಡುವೆ ಮುಖಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದು, ರಿಕ್ಷಾ ಚಾಲಕ ಗಾಯಗೊಂಡಿದ್ದಾನೆ.

ನಗರದ ಗೌಸಿಯಾನಗರ ನಿವಾಸಿ ಸೈಯದ್ ಯಾಸಿನ್(22)ಮೃತಪಟ್ಟಿದ್ದು, ಆಟೋ ರಿಕ್ಷಾ ಚಾಲಕ ಗಂಗಾಧರ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಯದ್ ಯಾಸಿನ್ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಆಟೋ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net