ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

Shankragouda death
Published on

ಹಿರೇಕೆರೂರ: ಬೈಕ್​ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ತಾಲೂಕಿನ ಅರಳಿಕಟ್ಟಿ ಸಮೀಪದ ತಿರುವಿನಲ್ಲಿ ಸಂಭವಿಸಿದೆ. ತಾಲೂಕಿನ ದೀವಿಗಿಹಳ್ಳಿ ಗ್ರಾಮದ ಶಂಕ್ರಗೌಡ ಹೊಳಬಸಪ್ಪ ಶಿರಳ್ಳಿ (26) ಮೃತ ಯವಕ. ಈತ ಅರಳಿಕಟ್ಟಿಯಿಂದ ಒಡೆಯನಪುರ ಗ್ರಾಮಕ್ಕೆ ತಂದೆ ಹೊಳಬಸಪ್ಪ ಅವರನ್ನು ಬೈಕ್ ಹಿಂಬದಿ ಕೂರಿಸಿಕೊಂಡು ತೆರಳುತ್ತಿ್ತ್ದ. ಅದೇ ಮಾರ್ಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ. ಲಾರಿ ಚಾಲಕ ಮಂಜಪ್ಪ ಬೂದೆಪ್ಪ ಹುಲ್ಲತ್ತಿ ವಿರುದ್ಧ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net