

ಹೆಬ್ರಿ: ಅಜೆಕಾರು ಮರ್ಣೆ ಗ್ರಾಮದ ರವಿ (32) ಮತ್ತು ವಿಶ್ವನಾಥ ಬೈಕಲ್ಲಿ ಹೆಬ್ರಿಯಿಂದ ಅಜೆಕಾರು ಕಡೆಗೆ ಹೋಗುತ್ತಿರುವಾಗ ಸೋಮವಾರ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಕೆಲಕಿಲ ಸೇತುವೆ ಬಳಿಯಲ್ಲಿ ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ.
ಬೈಕ್ ಸವಾರರು ರಸ್ತೆಗೆ ಬಿದ್ದ ಪರಿಣಾಮ ವಿಶ್ವನಾಥ ತಲೆ ಎದೆಗೆ ಮತ್ತು ಎಡಕಾಲಿಗೆ, ಸಹಸವಾರ ರವಿಗೆ ತಲೆಗೆ ಮತ್ತು ಎಡಕಾಲಿನ ಪಾದದ ಬಳಿ ಗಾಯವಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತ್ರೇಸಿಯಮ್ಮ ಅವರಿಗೂ ಗಾಯವಾಗಿದೆ.
ಗಾಯಾಳು ವಿಶ್ವನಾಥ ಅವರಿಗೆ ಹೆಬ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.