ಅಪಘಾತದಲ್ಲಿ ಬೈಕ್ ಸವಾರ ಸಾವು

Bike rider dies in accident
ಇಳಕಲ್ಲ ಹುನಗುಂದ ರಾಷ್ಟ್ರೀಯ ಹೆದ್ದಾರಿ 50ರ ಕಡಪಟ್ಟಿ ಫಾರ್ಮ್‌ಹೌಸ್ ಬಳಿ ನಡೆದ ಅಪಘಾತ ಸ್ಥಳಕ್ಕೆ ಸಿಪಿಐ ಸುನೀಲ ಸವದಿ ಭೇಟಿ ನೀಡಿ ಪರಿಶೀಲಿಸಿದರು.
Published on

ಇಳಕಲ್ಲ(ಗ್ರಾ): ಪಟ್ಟಣದ ಕಡಪಟ್ಟಿ ಫಾರ್ಮ್ ಹೌಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಬೊಲೆರೋ ವಾಹನ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದಾನೆ.

ಅಮರಾವತಿ ಗ್ರಾಮದ ದೇವಪ್ಪ ಸಾಬಣ್ಣ ಗೋನಾಳ (37) ಮೃತಪಟ್ಟಿದ್ದಾರೆ. ಹುನಗುಂದದಿಂದ ಇಳಕಲ್ಲದತ್ತ ಬೈಕ್ ಮೇಲೆ ಹೊರಟಿದ್ದಾಗ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹಾರಿ ಲಾರಿಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಗುದ್ದಿದ್ದರಿಂದ ಈ ಘಟನೆ ನಡೆದಿದೆ.

ಬೊಲೆರೋ ವಾಹನ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಿಪಿಐ ಸುನೀಲ ಸವದಿ, ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net