ಅಪಘಾತದಲ್ಲಿ ಬೈಕ್ ಸವಾರ ಸಾವು

VV DIGITAL
Published on

ಶಿರಸಿ: ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರನೋರ್ವ ಮೃತಪಟ್ಟ ಘಟನೆ ತಾಲೂಕಿನ ಬನವಾಸಿ ಬಳಿಯ ಮಧುರವಳ್ಳಿಯಲ್ಲಿ ಗುರುವಾರ ಸಂಭವಿಸಿದೆ.

ಬೆಂಗಳೆ ಸಮೀಪದ ಮಂಟಗಾಲನ ತಿಮ್ಮಪ್ಪ ಮಂಜು ದೇವಾಡಿಗ (30) ಮೃತ ಸವಾರ.

ಇನ್ನೊಂದು ಬೈಕ್ ಸವಾರ ಸೊರಬಾ ಸಮೀಪದ ಮೂಗೂರು ನಿವಾಸಿ ಕುಮಾರ ತಿಮ್ಮಪ್ಪ ಅಂಬಿಗೇರಿ ತನ್ನ ಬೈಕ್ ಅನ್ನು ಗುಡ್ಡಾಪುರ ಕಡೆಯಿಂದ ಮಧುರವಳ್ಳಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯಂದ ಚಲಾಯಿಸಿ, ಬೆಂಗಳೆಯಿಂದ ಬನವಾಸಿ ಕಡೆಗೆ ಹೋಗುತ್ತಿದ್ದ ತಿಮ್ಮಪ್ಪ ದೇವಾಡಿಗ ಚಲಾಯಿಸುತ್ತಿದ್ದ ಬೈಕ್​ಗೆ ಪಡಿಸಿದ್ದಾನೆ.

ಅಪಘಾತದ ರಭಸಕ್ಕೆ ಬೈಕ್ ಜಖಂಗೊಂಡು ಸವಾರ ರಸ್ತೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.

ಅಪಘಾತಕ್ಕೆ ಕಾರಣನಾದ ಕುಮಾರ ಅಂಬಿಗೇರಿ ಮೇಲೆ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net