

ಆರ್.ಟಿ.ನಗರದ ಯೂನಿವರ್ಸಿಟಿ ಲೇಔಟ್ ಬಳಿಯ ರಿಂಗ್ ರಸ್ತೆಯಲ್ಲಿ ಸೋಮವಾರ ನಿಯಂತ್ರಣ ಕಳೆದುಕೊಂಡ ಬೈಕ್ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಂಜನಗೂಡು ತಾಲೂಕು ಗೋಳೂರು ಗ್ರಾಮದ ಎನ್.ಶ್ರೀನಿವಾಸ್(22) ಮೃತರು. ಶ್ರೀನಿವಾಸ್ ಬದನವಾಳುವಿನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸೋಮವಾರ ಮೈಸೂರಿಗೆ ಬಂದು ಬೈಕ್ ಸರ್ವಿಸ್ ಮಾಡಿಸಿಕೊಂಡು ವಾಪಸ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ರಸ್ತೆಯ ತಿರುವಿನಲ್ಲಿ ಅತಿಯಾದ ವೇಗದಿಂದ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದ ಬೈಕ್ ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ನಂತರ ಮರಕ್ಕೆ ಗುದ್ದಿತು. ಹೆಲ್ಮೆಟ್ ಧರಿಸದ ಸವಾರ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.