ಬೈಕ್ ಸವಾರ ಸಾವು

Published on

ಬ್ಯಾಡಗಿ: ಎರಡು ಬೈಕ್‌ಗಳು ಡಿಕ್ಕಿಯಾಗಿ ಸವಾರನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಆಣೂರು ಬನ್ನಿಹಟ್ಟಿ ರಸ್ತೆಯ ಕೊಲ್ಲಾಪುರ ಕ್ರಾಸ್ ಬಳಿ ಮಂಗಳವಾರ ನಡೆದಿದೆ. ಮೃತನನ್ನು ಆಣೂರು ಗ್ರಾಮದ ನಾಗರಾಜ ಬಸವಣ್ಣೆಪ್ಪ ಗಾಣಿಗೇರ (31) ಎಂದು ಗುರುತಿಸಲಾಗಿದೆ.

ಇನ್ನೊಬ್ಬ ಬೈಕ್ ಸವಾರ ಶಿವಾನಂದ ಸಣ್ಣಮನಿ ಹಾಗೂ ಹಿಂಬದಿ ಸವಾರರಾದ ರೇಖಾ ಚೆನ್ನಪ್ಪನವರ, ಅಭಿಷೇಕ ಸಣ್ಣಮನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net