ಹುಣಸೀಕಟ್ಟಿ ಬಳಿ ಬೈಕ್ ಸವಾರ ದುರ್ಮರಣ

ACCIDENT
Published on

ನರಗುಂದ: ದ್ವಿಚಕ್ರ ವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹುಣಸೀಕಟ್ಟಿ ಬಳಿ ಮಂಗಳವಾರ ಸಂಭವಿಸಿದೆ.

ಅಳಗವಾಡಿಯ ಸುರೇಶ ಗಾಣಿಗೇರ (48) ಮೃತಪಟ್ಟ ದುರ್ದೈವಿ. ಬೈಕ್‌ನಲ್ಲಿ ನರಗುಂದ ಕಡೆಗೆ ಬರುತ್ತಿದ್ದ ಸುರೇಶಗೆ ನರಗುಂದದಿಂದ ಅಳಗವಾಡಿ ಕಡೆಗೆ ವೇಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಅವಘಡ ನಡೆದಿದೆ.

ಪೊಲೀಸರು ಚಾಲಕ ಅಳಗವಾಡಿಯ ಅನೀಲ ಪ್ರಕಾಶ ಲಕ್ಕುಂಡಿ ಎಮಬಾತನನ್ನು ಬಂಧಿಸಿ ಟ್ರಾೃಕ್ಟರ್ ವಶಕ್ಕೆ ಪಡೆದಿದ್ದಾರೆ. ಮೃತಪಟ್ಟ ಸುರೇಶ ಗಾಣಿಗೇರ ಅವರ ಮಗ ವಿನೋದ ಗಾಣಿಗೇರ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸಿಪಿಐ ಮಂಜುನಾಥ ನಡುವಿನಮನಿ ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net