ಬೈಕ್ ಸವಾರ ಸಾವು

Bike Accident_2
Published on

ಭಟ್ಕಳ: ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮುರ್ಡೇಶ್ವರ ನಾಕಾ ಬಳಿ ಮಂಗಳವಾರ ನಡೆದಿದೆ.

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಹಿರೆವುಲ್ಲಾಳ ಗ್ರಾಮದ ನೀಲಪ್ಪ (32) ಮೃತಪಟ್ಟ ಯುವಕ. ಹಾವೇರಿಯಿಂದ ಉಡುಪಿ ಜಿಲ್ಲೆಗೆ ಕೆಲಸಕ್ಕೆಂದು ತೆರಳುತ್ತಿದ್ದರು. ಮುರ್ಡೇಶ್ವರದ ಬಳಿ ನಿಲ್ಲುತ್ತಿದ್ದ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net