ಅಪಘಾತ, ಬೈಕ್ ಸವಾರ ಸಾವು

accident
Published on

ಉಳ್ಳಾಲ: ತೊಕ್ಕೊಟ್ಟು ಸಮೀಪದ ಕೆರೆಬೈಲ್ ಕೊರಗಜ್ಜನ ಕಟ್ಟೆ ಬಳಿ ದ್ವಿಚಕ್ರ ವಾಹನಗಳ ನಡುವೆ ಶನಿವಾರ ನಸುಕಿನ ವೇಳೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂತೋಷ್ ನಗರ ನಿವಾಸಿ ಸಂದೇಶ್ ಪೂಜಾರಿ(31) ಮೃತ ದುರ್ದೈವಿ.

ಕ್ರವಾರ ರಾತ್ರಿ ಕನೀರು ತೋಟದಲ್ಲಿ ನಡೆದಿದ್ದ ಜಾತ್ರೆಗೆ ಹೋಗಿದ್ದ ಸಂದೇಶ್, ಮುಂಜಾನೆ ಪಲ್ಸರ್ ಬೈಕ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಕೆರೆಬೈಲ್ ಕೊರಗಜ್ಜನ ಕಟ್ಟೆ ಬಳಿ ತಲುಪಿದಾಗ ಎದುರಿನಿಂದ ಬಂದ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸಂದೇಶ್ ರಸ್ತೆ ಗೆಸೆಯಲ್ಪಟ್ಟಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಸವಾರನೂ ಗಂಭೀರ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ. ಕೆಲ ತಾಸಿನ ಬಳಿಕ ಈ ರಸ್ತೆಯಾಗಿ ಸಾಗುತ್ತಿದ್ದ ವಾಹನ ಸವಾರರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net