ಬೈಕ್ ಸವಾರ ಸಾವು

Death
Published on

ಬೆಳಗಾವಿ: ಬೈಕ್ ಮೇಲೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದ ಸವಾರನೊಬ್ಬ ಮೃತಪಟ್ಟ ಘಟನೆ ಯಳ್ಳೂರು ಸುಳಗಾ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ರಾಜಹಂಸ ಘಡದ ವೈಜು ಬುರ್ಲಕಟ್ಟಿ (52) ಮೃತಪಟ್ಟ ವ್ಯಕ್ತಿ.

ಕಿರಾಣಿ ವ್ಯಾಪಾರಿಯಾಗಿದ್ದ ವೈಜು ಅವರು, ಯಳ್ಳೂರಿಂದ ಬೆಳಗಾವಿ ಕಡೆಗೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net