

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಬೈಕ್ ಜಾಥಾ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು.
ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಕನ್ನಡ ಪ್ರಜ್ಞೆ, ಕನ್ನಡ ಪ್ರೇಮ ಪ್ರತಿಯೊಬ್ಬರಲ್ಲಿಯೂ ಜಾಗೃತವಾಗಿ ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಬೇಕು. ಮಂಡ್ಯ ಜನತೆಗೆ ಜಾಗೃತಿ ಮೂಡಿಸಲು ಜಾಥಾ ಆಯೋಜಿಸಲಾಗಿದೆ ಎಂದರು.
ಜಾಥಾವು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟು ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಕಲ್ಲಹಳ್ಳಿಯ ಎಪಿಎಂಸಿ ಮಾರುಕಟ್ಟೆ, ವಿ.ವಿ ನಗರ, ಅನ್ನಪೂರ್ಣೇಶ್ವರಿನಗರ, ಕಾರಸವಾಡಿ ರಸ್ತೆಯ ಅರಳಿಮರ ವೃತ್ತದ ಮುಖಾಂತರ ಕಾಲುವೆ ರಸ್ತೆಯಲ್ಲಿ ಸಾಗಿ ಹೊಸಹಳ್ಳಿಯ ವೆಂಕಟೇಶ್ವರ ದೇವಸ್ಥಾನ, ಬಿಸಿಲು ಮಾರಮ್ಮನ ದೇವಸ್ಥಾನ ಹೊಸಹಳ್ಳಿ ವೃತ್ತ, 100 ಅಡಿ ರಸ್ತೆಯಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿಯಿಂದ ಸುಭಾಷ್ ನಗರ, ವಿನೋಬ ರಸ್ತೆ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಕರ್ನಾಟಕ ಬಾರ್ ವೃತ್ತ, ಮಹಾವೀರ ವೃತ್ತ, ಬೆಸಗರಹಳ್ಳಿ ರಾಮಣ್ಣ ವೃತ್ತ, ಆಸ್ಪತ್ರೆ ರಸ್ತೆ, ನಂದಾ ವೃತ್ತ, ಫ್ಯಾಕ್ಟರಿ ವೃತ್ತ, ಗುತ್ತಲು ರಸ್ತೆ, ಸ್ವರ್ಣಸಂದ್ರ ಶನೇಶ್ಚರ ದೇವಸ್ಥಾನದ ಮೂಲಕ ಕಾಳಮ್ಮನ ದೇವಸ್ಥಾನ, ಕಾರೆಮನೆ ಗೇಟ್, ಹೊಳಲು ವೃತ್ತದ ಮೂಲಕ ಸಂಚರಿಸಿ ರೈತ ಸಭಾಂಗಣ ಆವರಣದಲ್ಲಿ ಅಂತ್ಯಗೊಂಡಿತು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಕೋಶಾಧ್ಯಕ್ಷ ಅಪ್ಪಾಜಪ್ಪ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ಪದಾಧಿಕಾರಿಗಳಾದ ರತ್ನಾಶ್ರೀ, ವಿಜಯಲಕ್ಷ್ಮೀ, ಲತಾ, ಎಂ.ಎ.ಪ್ರಮೀಳಾ, ಪುಷ್ಪಲತಾ ಇತರರಿದ್ದರು.