ಮಹಿಳಾ ಜಾಗೃತಿಗಾಗಿ ಬೈಕ್ ರ್ಯಾಲಿ,  ರೋಟರಿ ಕ್ಲಬ್ ನಿಂದ ಆಯೋಜನೆ

IMG_20241119_110716_811-1.jpg
Published on

ಹುಬ್ಬಳ್ಳಿ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಮೂಡಿಸಲು ಇಲ್ಲಿಯ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ನೇತೃತ್ವದಲ್ಲಿ ನ. 24ರಂದು ಬೆಳಗ್ಗೆ 7ಕ್ಕೆ ಮಹಿಳೆಯರಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯೆ ರಾಜೇಶ್ವರಿ ವಾಸುಕಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೈಸನ್ಸ್ ಹೊಂದಿದ ಹಾಗೂ ವಾಹನದ ವಿಮೆ ಕಡ್ಡಾಯವಾಗಿ ಜತೆಗೆ ಇಟ್ಟುಕೊಂಡು ಮಹಿಳೆಯರು ಬೈಕ್ ಚಲಾಯಿಸಬಹುದು. ದ್ವಿಚಕ್ರ ವಾಹನ ಸವಾರರು ಕಡ್ಡಾಯ ಹೆಲ್ಮೇಟ್ ಧರಿಸುವ ಮೂಲಕ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕೆಂದು ಜಾಗೃತಿ ಮೂಡಿಸಲಾಗುವುದು ಎಂದರು.

ಸ್ವರ್ಣ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ ವಿವಿಧ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಸಾಮಾಜಿಕ ಬದಲಾವಣೆಗೆ ಕೈಜೋಡಿಸಿವೆ ಎಂದರು.

ಭಾನುವಾರ ಬೆಳಗ್ಗೆ 7.30ಕ್ಕೆ ಬಿವಿಬಿ ಪ್ರವೇಶ ದ್ವಾರದ ಎದುರು ರ್ಯಾಲಿಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಧಾರವಾಡದ ಟೆಕ್ ಫಾರ್ಮ್ ವರೆಗೆ ರ್ಯಾಲಿ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಟೆಕ್ ಫಾರ್ಮನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಸಾಂಸತಿಕ, ಸ್ಪರ್ಧಾ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಕಾರ್ಯದರ್ಶಿ ಶ್ರಾವಣಿ ಪವಾರ ತಿಳಿಸಿದರು.

ಕ್ಲಬ್ ಕಾರ್ಯದರ್ಶಿ ಶ್ರೀವಲ್ಲಿ ಹೆಬಸೂರ, ತೇಜಶ್ವಿನಿ ಜಿತೂರಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net