ಮತದಾನ ಜಾಗೃತಿಗೆ ಬೈಕ್​ ರ್ಯಾಲಿ

10 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಜನರಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್​ ಸಮಿತಿ ವತಿಯಿಂದ ಬುಧವಾರ ನಗರದಲ್ಲಿ ಬೈಕ್​ ರ್ಯಾಲಿ ನಡೆಸಲಾಯಿತು.
ಕರ್ನಾಟಕ ಕಾಲೇಜು ಆವರಣದಲ್ಲಿ ಬೈಕ್​ ರ್ಯಾಲಿಗೆ ಚಾಲನೆ ನೀಡಿದ ಜಿಪಂ ಸಿಇಒ ಸ್ವರೂಪ ಟಿ.ಕೆ., ಮತದಾರರೆಲ್ಲರೂ ತಮ್ಮ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಹಾಗೂ ನೆರೆ&ಹೊರೆಯವರಿಗೂ ಮತದಾನ ಹಕ್ಕು ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದರು.
ಕಾಲೇಜು ಆವರಣದಿಂದ ಆರಂಭವಾದ ಬೈಕ್​ ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಿತು. ಜಿಲ್ಲಾ ಕೈಗಾರಿಕೆ ಉಪ ನಿರ್ದೇಶಕ ಭೀಮಪ್ಪ ಮಾದರ ಚುನಾವಣೆ ಪ್ರತಿಜ್ಞಾವಿ-ಧಿ ಬೋಧಿಸಿದರು.
ಜಿಪಂ ಮುಖ್ಯ ಯೋಜನಾ-ಧಿಕಾರಿ ದೀಪಕ ಮಡಿವಾಳ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ, ಯು ಪ್ಲೆಕ್ಸ್​ ಕಂಪನಿಯ ಅರುಣ ಹೆಬ್ಳೀಕರ, ಕಂಪನಿ ಮುಖ್ಯಸ್ಥರು, ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net