ಎಚ್‌ಡಿಕೆ ನಾಮಪತ್ರ ಸಲ್ಲಿಕೆಗೆ ಬೈಕ್ ರ‌್ಯಾಲಿ

4-pnp 2
Published on


ಮಂಡ್ಯ : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೊಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‌್ಯಾಲಿ ಮೂಲಕ ಪಾಂಡವಪುರದಿಂದ ಮಂಡ್ಯಕ್ಕೆ ತೆರಳಿ ಮೈತ್ರಿಕೂಟ ಅಭ್ಯರ್ಥಿಯನ್ನು ಬೆಂಬಲಿಸಿದರು.


ರ‌್ಯಾಲಿ ಉದ್ದಕ್ಕೂ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಿಂದಲೂ ಸ್ವಯಂ ಪ್ರೇರಿತರಾಗಿ ಹೊರಟ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮಾರ್ಗದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ಪರವಾಗಿ ಜೈಕಾರದ ಘೋಷಣೆಗಳನ್ನು ಕೂಗಿದರು.


ಪಟ್ಟಣದ ಮಹಾತ್ಮಗಾಂಧಿ ನಗರದಿಂದ ಪುರಸಭೆ ಸದಸ್ಯ, ಚಂದ್ರು, 11, 7, ವಾರ್ಡ್‌ನಿಂದ ಪುರಸಭೆ ಸದಸ್ಯರಾದ ಶಿವಕುಮಾರ್ ಮತ್ತು ಗೀತಾ ಅರ‌್ಮುಗಂ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮಂಡ್ಯಕ್ಕೆ ತೆರಳಿ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ವೇಳೆ ಪುರಸಭೆ ಸದಸ್ಯ ಚಂದ್ರು ಮಾತನಾಡಿದರು. ಜೆಡಿಎಸ್ ಮುಖಂಡರಾದ ಹಾರೋಹಳ್ಳಿ ಪಟೇಲ್ ಕೃಷ್ಣೇಗೌಡ, ಸೀತಾಪುರ ಬಲರಾಮು, ಮಹೇಶ್, ರವಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net