

ರಾಯಚೂರು ಭೋವಿ ಅಭಿವೃದ್ಧಿ ನಿಗಮಕ್ಕೆ ನೀಡಿರುವ ಅನುದಾನವನ್ನು ಹಿಂಪಡೆದಿದ್ದನ್ನು ವಿರೋಧಿಸಿ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ನೇತೃತ್ವದಲ್ಲಿ ಅ.8ರಂದು ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿ ಪ್ರತಿಭಟಿಸಲು ನಿರ್ಧರಿಸಲಾಗಿದೆಂದು ಭೋವಿ ವಡ್ಡರ ಸಂಘದ ಸದಸ್ಯ ನಾಗರಾಜ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ನಡೆಯನ್ನು ಖಂಡಿಸಿ ನಡೆಯಲಿರುವ ಬೈಕ್ ರ‌್ಯಾಲಿ ನಗರದ ಸಿದ್ದರಾಮೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ ವೃತ್ತವರೆಗೆ ನಡೆಯಲಿದೆ. ಅಲ್ಲಿಂದ ಪಾದಾಯಾತ್ರೆ ಮೂಲಕ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ತೆರಳಿ ಬೀಗ ಹಾಕಿ ಪ್ರತಿಭಟಿಸಲಾಗುತ್ತದೆ.
ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಸರ್ಕಾರ ಮುಂದಾಗಿದೆ. ಕಳೆದ ವರ್ಷ 14 ಸಾವಿರ ಕೋಟಿ ರೂ ಬಳಕೆ ಮಾಡಿದ್ದರೆ, ಈ ವರ್ಷ 13 ಸಾವಿರ ಕೋಟಿ ರೂ ಬಳಸಲು ಮುಂದಾಗಿದೆ. ಅನ್ಯ ಯೋಜನೆಗಳಿಗೆ ಎಸ್‌ಇಪಿ ಟಿಎಸ್‌ಪಿ ಅನುದಾನ ಬಳಸಲು ಕಾನೂನಾತ್ಮಕ ಅವಕಾಶ ಇಲ್ಲದೇ ಇದ್ದರು ಸರ್ಕಾರ ಬಳಿಸಿಕೊಂಡು ಪರಿಶೀಷ್ಟ ಸಮೂದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ಭೋವಿ ಸಮಾಜದ ಅಭಿವೃದ್ಧಿಗೆ ಅನುದಾನವೇ ಇಲ್ಲದಂತಾಗಿದೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ನಾರಾಯಣಸ್ವಾಮಿ, ಕೆ.ತಿಮ್ಮಪ್ಪ, ಲಕ್ಷ್ಮಣ ರಾಮನಗರ, ಕಾಶಿನಾಥ, ಶರಣಪ್ಪ, ಚೆನ್ನಪ್ಪ, ಮಾರೆಪ್ಪ, ನಾಗರಾಜ ಗೌಸನಗರ, ಸಂತೋಷ ಇದ್ದರು.