ಶಾಶ್ವತ ನೀರು ಯೋಜನೆಗೆ ನ.19 ರಂದು ಬೈಕ್‌

18 HBH 01
ಹಗರಿಬೊಮ್ಮನಹಳ್ಳಿ ತಾಲೂಕಿನ ಹಲಗಾಪುರದಲ್ಲಿ ಕ್ಷೇತ್ರದ 17 ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆಯನ್ನು ಕೂಡಲೆ ಅನುಷ್ಠಾನಗೊಳ್ಳಲಿ ಸಭೆ ನಡೆಯಿತು. ಸಂಘಟನೆ ಸಂಚಾಲಕ ಬುಡ್ಡಿ ಬಸವರಾಜ, ಮಠಾಧೀಶರಾದ ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ಉತ್ತಂಗಿ ಮಠದ ಸೋಮಶೇಖರ ದೇವರು, ಶ್ರೀಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ, ಗದ್ದಿಕೆರೆ ಚರಂತೇಶ್ವರ ಸ್ವಾಮೀಜಿ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಕ್ಷೇತ್ರ ವ್ಯಾಪ್ತಿಯ 17 ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆ ಕೈಗೊಳ್ಳಲು ಆಗ್ರಹಿಸಿ ಮಠಾಧೀಶ ಧರ್ಮ ಪರಿಷತ್ ಮತ್ತು ಕೃಷಿ ಭೂಮಿ ಉಳಿವಿಗಾಗಿ ನಾವು ಸಂಘಟನೆ ನೇತೃತ್ವದಲ್ಲಿ ಸಿಎಂಗೆ ಮನವಿ ಸಲ್ಲಿಸಲು ನ.9ರಂದು ಪಟ್ಟಣದಿಂದ ಕೂಡ್ಲಿಗಿಯಲ್ಲಿ ಬೈಕ್‌ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಭೂಮಿ ಉಳಿವಿಗಾಗಿ ನಾವು ಸಂಘಟನೆ ತಾಲೂಕು ಸಂಚಾಲಕ ಬುಡ್ಡಿ ಬಸವರಾಜ ಹೇಳಿದರು.

ತಾಲೂಕಿನ ಮಗಿಮಾವಿನಹಳ್ಳಿಯಲ್ಲಿ ಸಂಘಟನೆಯಿಂದ ಶನಿವಾರ ಆಯೋಜಿಸಿದ್ದ ಕ್ಷೇತ್ರದ 17ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆಯನ್ನು ಕೂಡಲೆ ಅನುಷ್ಠಾನಗೊಳ್ಳಲಿ ಎನ್ನುವ ಹೋರಾಟದ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ಕ್ಷೇತ್ರ ವ್ಯಾಪ್ತಿಯ ನಾನಾ ಗ್ರಾಮಗಳ ಕೆರೆಗಳ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿದ್ದು, ಕೆರೆಗಳ ವ್ಯಾಪ್ತಿಯ ಸಾರ್ವಜನಿಕರು, ರೈತರು, ಕೂಲಿ ಕಾರ್ಮಿಕರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಈ ಶಾಶ್ವತ ನೀರು ತುಂಬಿಸುವ ಯೋಜನೆ ಈಗಾಗಲೆ ಜಿಪಿಎಸ್ ಮಾಡಿ ವರದಿಕೂಡ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಯೋಜನೆ ಕಾರ್ಯಕೈಗೊಳ್ಳಬೇಕಾಗಿದೆ ಎಂದ ಅವರು, ಯೋಜನೆ ಅನುಷ್ಠಾನಗೊಂಡರೆ ಪ್ರತಿ ಕೆರೆಗಳ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ ಎಂದರು.

ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಉತ್ತಂಗಿ ಮಠದ ಸೋಮಶೇಖರ ದೇವರು, ಶ್ರೀಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ, ಗದ್ದಿಕೆರೆ ಚರಂತೇಶ್ವರ ಸ್ವಾಮೀಜಿ ಮಾತನಾಡಿದರು. ಹನಸಿ ಪ್ರಭುಸ್ವಾಮೀಜಿ, ಹನಸಿ ಕೊಟ್ರೇಶ್, ಬ್ಯಾಲಾಳು ನಿಂಗಪ್ಪ, ಬ್ಯಾಲಾಳ ವಿಶ್ವನಾಥ್, ರಮೇಶ ಕರಿಬಸಯ್ಯ, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net