

ರಾಣೆಬೆನ್ನೂರ: ಬೈಕ್ಗೆ ಅಶೋಕ ಲೈಲ್ಯಾಂಡ್ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಗ್ರಾಮದ ನಡೆದಿದೆ.
ಹರಿಹರ ತಾಲೂಕಿನ ಕೊಕ್ಕನೂರ ಗ್ರಾಮದ ಮಲ್ಲಪ್ಪ ಹನುಮಂತಪ್ಪ ಗಡ್ಡದರ ಮೃತ ವ್ಯಕ್ತಿ.
ಇವರು ಬೈಕ್ ಮೇಲೆ ರಾಣೆಬೆನ್ನೂರ ಕಡೆಯಿಂದ ಹಲಗೇರಿ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಅಶೋಕ ಲೈಲ್ಯಾಂಡ್ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಲ್ಲಪ್ಪ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.