ತರಕಾರಿ ತೆಗೆದುಕೊಂಡು ಬರುತ್ತಿದ್ದ ದಂಪತಿ ದಾರಿ ಮಧ್ಯೆಯೇ ಹೆಣವಾದರು; ಹಿಂದಿನಿಂದ ಬಂದು ಗುದ್ದಿ ಹಾದುಹೋದ ಲಾರಿ...

Accident
Published on

ಬೀದರ್​: ವಾಹನ ಸವಾರರು ಖುದ್ದು ಎಚ್ಚರದಿಂದಲೇ ವಾಹನ ಚಲಾಯಿಸಿದರೂ ಬೇರೆ ವಾಹನಗಳು ಬಂದು ಡಿಕ್ಕಿ ಹೊಡೆದು ಅಪಘಾತಗಳಾದ, ಪ್ರಾಣ ಕಳೆದುಕೊಂಡ ಎಷ್ಟೋ ಪ್ರಕರಣಗಳಿವೆ. ಅಂಥ ಪ್ರಕರಣಗಳ ಪಾಲಿಗೆ ಇದೊಂದು ಹೊಸ ಸೇರ್ಪದೆ.

ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಚಲಿಸುತ್ತಿದ್ದ ಬೈಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಲ್ಲದೆ, ಸವಾರರ ಮೇಲೆ ಹಾದುಹೋದ ಕಾರಣ ಬೈಕ್​ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೀದರ್ ತಾಲೂಕಿನ ಶಂಶೇರ್​ನಗರ ಬಳಿ ಈ ರಸ್ತೆ ಅಪಘಾತ ಸಂಭವಿಸಿದ್ದು, ಬಾವಗಿ ಗ್ರಾಮದ ಸೈಲಾನಿ ಫಕೀರ್ (48) ಹಾಗೂ ಅವರ ಪತ್ನಿ ಬಿಪಾಷಾ (40) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಗಂಡ-ಹೆಂಡತಿ ತರಕಾರಿ ಖರೀದಿಸಿಕೊಂಡು ಬೀದರ್​ನಿಂದ ಬಾವಗಿ ಗ್ರಾಮಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣವಾಗಿರುವ ಲಾರಿಯಲ್ಲಿ ಕಬ್ಬು ಸಾಗಿಸಲಾಗುತ್ತಿತ್ತು. ಬೀದರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net