ಬೈಕ್‌ನಲ್ಲಿ ಬಂದ ಖದೀಮರ ಕೈಚಳಕ

060622 Hosapete The robbers flee a woman's gold
ಹೊಸಪೇಟೆಯ ಇಲ್ಲಿನ ಆಕಾಶವಾಣಿ ನಗರದಲ್ಲಿ ಬೈಕ್‌ನಲ್ಲಿ ಬಂದಿದ್ದ ಕಳ್ಳರು ಮಹಿಳೆಯೊಬ್ಬರ ಚಿನ್ನದ ಸರ ಕಳುವು ಮಾಡಿ ಪರಾರಿಯಾಗಿದ್ದಾರೆ.
Published on

ಹೊಸಪೇಟೆ: ಬೈಕ್‌ನಲ್ಲಿ ಬಂದ ಖದೀಮರು ವಾಯು ವಿಹಾರಕ್ಕೆ ತೆರಳಿದ್ದ ವೃದ್ಧೆಯೊಬ್ಬರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಸೋಮವಾರ ಕಳುವು ಮಾಡಿ ಪರಾರಿಯಾಗಿದ್ದಾರೆ.

ಇಲ್ಲಿನ ಆಕಾಶವಾಣಿ ನಗರದ ಮದಕರಿ ಶಾಲೆ ಸಮೀಪದ ನಿವಾಸಿ ಶಾರದಾ ಕುರಂದವಾಡ್(62) ಮಾಂಗಲ್ಯ ಸರ ಕಳ್ಳತನವಾಗಿದೆ. ಸೋಮವಾರ ಬೆಳಗ್ಗೆ ಶಾರದಾ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದು, 6.15ರ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರು, ವೃದ್ಧೆಯ ಚಲನವಲನ ಗಮನಿಸಿ, ಕೆಲ ಸಮಯ ಹಿಂಬಾಲಿಸಿದ್ದಾರೆ. ಬಳಿಕ ಸಮಯ ನೋಡಿ ವೃದ್ಧೆಯ ಕೊರಳಿಗೆ ಕೈಹಾಕಿದ್ದು, ಕ್ಷಣಮಾತ್ರದಲ್ಲಿ 1.75 ಲಕ್ಷ ರೂ. ಮೌಲ್ಯದ 3.5 ತೊಲೆ ಚಿನ್ನದ ಸರವನ್ನು ಕಳುವು ಮಾಡಿ, ಪರಾರಿಯಾಗಿದ್ದಾರೆ. ಕೃತ್ಯದ ಸಂಪೂರ್ಣ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net