ಸಂಚಾರ ನಿಯಮ ಜಾಗೃತಿಗೆ ಬೈಕ್ ಜಾಥಾ

9 smg bike rally
ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಶಿವಮೊಗ್ಗ ನಗರದಲ್ಲಿ ಶನಿವಾರ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
Published on

ಶಿವಮೊಗ್ಗ: ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೈಕ್ ಜಾಥಾಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಚಾಲನೆ ನೀಡಿದರು.

ಪೊಲೀಸ್ ಇಲಾಖೆ, ಬುಲ್ಸ್ ಆಫ್ ಶಿವಮೊಗ್ಗ, ಬೈಕರ್ಸ್ ಆಫ್ ಶಿವಮೊಗ್ಗ, ರಾಯಲ್ ರೋಲಿಂಗ್ ಮಾಂಕ್ಸೃ್ ಶಿವಮೊಗ್ಗ, ರೋಡ್ ಥ್ರಿಲ್ಲರ್ಸ್ ಶಿವಮೊಗ್ಗ, ಮಲ್ನಾಡ್ ಟಸ್ಕರ್ಸ್ ಶಿವಮೊಗ್ಗ, ಕೆಟಿಎಂ ಶಿವಮೊಗ್ಗ ಮತ್ತು ಇತರ ಕ್ಲಬ್‌ಗಳ ಸಹಯೋಗದೊಂದಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
ನಗರದ ಡಿಎಆರ್ ಪೊಲೀಸ್ ಮೈದಾನದಿಂದ ಆರಂಭವಾದ ಜಾಥಾ ಐಬಿ ವೃತ್ತ, ಆಲ್ಕೊಳ ವೃತ್ತ, ವಿನೋಬನಗರ ಚೌಕಿ, ಉಷಾ ನರ್ಸಿಂಗ್ ಹೋಂ ವೃತ್ತ, ಮಹಾವೀರ ವೃತ್ತ, ಕರ್ನಾಟಕ ಸಂಘ, ಹೊಳೆ ಬಸ್ ಸ್ಟಾಪ್, ಎಂಆರ್‌ಎಸ್ ವೃತ್ತ, ನ್ಯೂ ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ಐಬಿ ವೃತ್ತ, ಕುವೆಂಪು ರಸ್ತೆಗಳಲ್ಲಿ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net