

ಬೆಂಗಳೂರು: ವೇಗದ ಹಾಗೂ ಅಜಾಗರೂಕತೆಯ ಚಾಲನೆಯನ್ನು ತಡೆಯಲೆಂದೇ ಸಂಚಾರ ಪೊಲೀಸರು ರಸ್ತೆಯಲ್ಲಿ ನಿಂತಿರುತ್ತಾರೆ. ಇನ್ನು ಸಿಗ್ನಲ್ ಇದ್ದರೂ ಲೆಕ್ಕಿಸದ ಸವಾರರು, ಸಿಗ್ನಲ್ ಬಳಿ ಪೊಲೀಸ್ ಇದ್ದರೆ ಸಂಚಾರ ನಿಯಮ ಉಲ್ಲಂಘಿಸಲು ಹಿಂಜರಿಯುತ್ತಾರೆ.
ಅಂಥದ್ದರಲ್ಲಿ ಇಲ್ಲೊಬ್ಬ ದ್ವಿಚಕ್ರ ವಾಹನ ಸವಾರ ಕರ್ತವ್ಯನಿರತ ಪೊಲೀಸ್ ಕಾನ್ಸ್ಟೆಬಲ್ಗೇ ಬೈಕ್ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಹಲಸೂರು ಗೇಟ್ ಸಂಚಾರ ಠಾಣೆಯ ಕಾನ್ಸ್ಟೆಬಲ್ ಮಧುಕುಮಾರ್ (26) ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಜೆ.ಸಿ. ರಸ್ತೆಯ ಶಿವಾಜಿ ಸಿಗ್ನಲ್ ಬಳಿ ಈ ಅಪಘಾತ ಸಂಭವಿಸಿದೆ. ಗಾಯಾಳು ಮಧುಕರ್ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.