

ಹಾನಗಲ್ಲ: ಬೈಕ್ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಅಕ್ಕಿಆಲೂರ-ಹೊಂಕಣ ರಸ್ತೆಯಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಹಾವಣಗಿ ಗ್ರಾಮದ ಬಸವರಾಜ ಚನ್ನವಿರಪ್ಪ ಹಾಲುಂಡಿ (23) ಮೃತ ಬೈಕ್ ಸವಾರ.
ಈತ ಹಾವಣಗಿ ಗ್ರಾಮದಿಂದ ಅಕ್ಕಿಆಲೂರಿಗೆ ತೆರಳುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ಬೈಕ್ನಿಂದ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.