

ಕಾರವಾರ/Bike Fire: ಚಲಿಸುತ್ತಿದ್ದ ಬೈಕ್ ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಅಮದಳ್ಳಿ ಬಳಿ ಗುರುವಾರ ನಡೆದಿದೆ. ಮುರ್ಡೇಶ್ವರದಿಂದ ಗೋವಾಕ್ಕೆ ಹೊರಟಿದ್ದ ಜಾವಾ ಬೈಕ್ ಬೆಂಕಿಗೆ ಆಹುತಿಯಾಗಿದೆ.
ಉತ್ತರ ಪ್ರದೇಶದ ಶಾವೇಶ ಎಂಬುವವರು ತಮ್ಮ ಇತರ ಮೂವರು ಸ್ನೇಹಿತರ ಜತೆ ಪ್ರತ್ಯೇಕ ಬೈಕ್ಗಳಲ್ಲಿ ದೇಶದ ಪ್ರವಾಸ ಹೊರಟಿದ್ದರು. ಬುಧವಾರ ಮುರ್ಡೇಶ್ವರದಲ್ಲಿ ಉಳಿದು, ಗುರುವಾರ ಗೋವಾ ಕಡೆ ಪ್ರಯಾಣ ಬೆಳೆಸುವಾಗ ಇದ್ದಕ್ಕಿದ್ದಂತೆ ಬೈಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವರು ಇಳಿದು ದೂರ ಹೋಗಿದ್ದಾರೆ. ಅಗ್ನಿಶಾಮಕ ವಾಹನ ಬರುವ ಹೊತ್ತಿಗೆ ಬೈಕ್ ಸಂಪೂರ್ಣ ಉರಿದು ಭಸ್ಮವಾಗಿತ್ತು.