

ಹುಬ್ಬಳ್ಳಿ: ಗುಂಡಿ ಬೈಕ್‌ನಲ್ಲಿ ಬಿದ್ದ ಪರಿಣಾಮ ಗಾಯಗೊಂಡಿದ್ದ ಹಿಂಬದಿ ಸವಾರ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ನಗರದ ಗೋಪನಕೊಪ್ಪ ರಸ್ತೆಯ ಸಿಲ್ವರ್ ಪಾರ್ಕ್ ಬಳಿ ನಡೆದಿದೆ.
ಹಾಲಕುಸುಗಲ್ಲ ಗ್ರಾಮದ ಈರಪ್ಪ ಬಡಿಗೇರ(20) ಮೃತ ಯುವಕ. ಮಾಧವ ನಗರದ ನೂರ್‌ಅಹ್ಮದ್ ಪೀರಖಾನವರ್ ಗಾಯಗೊಂಡಿದ್ದಾನೆ.
ರಮೇಶ ಭವನದಿಂದ ಸಿಲ್ವರ್ ಪಾರ್ಕ್ ಕಡೆಗೆ ಹೋಗುವಾಗ ಬೈಕ್ ಗುಂಡಿಗೆ ಬಿದ್ದಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.