

ರಾಣೆಬೆನ್ನೂರ: ಬೈಕ್ ತೆಗ್ಗಿಗೆ ಬಿದ್ದ ಕಾರಣ ಹಿಂಬದಿ ಕುಳಿತ್ತಿದ್ದ ಮಹಿಳೆಯೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಇಟಗಿ-ಮಣಕೂರ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಹಾವೇರಿ ತಾಲೂಕಿನ ಬಸವನಕಟ್ಟೆ ಗ್ರಾಮದ ನಿರ್ಮಲಾ ಮೌನೇಶ ಬಡಿಗೇರ (38) ಮೃತ ಮಹಿಳೆ.
ಇವರು ಬೈಕ್ ಮೇಲೆ ಇಟಗಿಯಿಂದ ಮಣಕೂರ ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ಬೈಕ್ ತಗ್ಗಿಗೆ ಬಿದ್ದ ಪರಿಣಾಮ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.