

ಬ್ಯಾಡಗಿ: ಬೈಕ್ ನಿಯಂತ್ರಿಸಲಾಗದೆ ಬಿದ್ದು ಪುರಸಭೆ ವಾಟರ್ಮ್ಯಾನ್ ಮೃತಪಟ್ಟ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದ ಪ್ರಶಾಂತ ಬಸಪ್ಪ ಮಡಿವಾಳರ (40) ಮೃತ ವ್ಯಕ್ತಿ.
ಇವರು ಪುರಸಭೆಯಲ್ಲಿ ವಾಟರ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್ ಮೇಲೆ ತೆರಳುತ್ತಿದ್ದ ನಿಯಂತ್ರಣ ಮಾಡಲಾಗದೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.