ಬೈಕ್‌ನಿಂದ ಬಿದ್ದು ಮೃತಪಟ್ಟ ಸವಾರ

Bike Accident_2
Published on

ಬಂಕಾಪುರ: ಬೈಕ್‌ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಲಕ್ಕಿಕೊಪ್ಪ ಬಳಿ ಬುಧವಾರ ನಡೆದಿದೆ.
ಗ್ರಾಮದ ನೀಲಪ್ಪ ಯಲ್ಲಪ್ಪ ಹರಿಜನ (28) ಮೃತ ಸವಾರ.
ಈತ ಗ್ರಾಮಕ್ಕೆ ಬರುತ್ತಿದ್ದ ಸಮಯದಲ್ಲಿ ಜಮೀನುವೊಂದರ ಬಳಿ ಇದ್ದ ಗೂಟಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net